ಕಾಮಕಟಂಕಟೆ

 ಒಬ್ಬ ರಾಕ್ಷಸಿ. ಪ್ರಾಗ್‍ಜ್ಯೋತಿಷಪುರದ ದೊರೆಯಾಗಿದ್ದ ನರಕಾಸುರನ ಸೇನಾಪತಿ ಮುರುವಿನ ಮಗಳು. ಕಾಮಾಖ್ಯಾ ದೇವತೆಯ ಔಪಾಸಕಳಾದ ಈಕೆ ಪ್ರಬಲೆಯಾಗಿದ್ದು ಸಾಹಸ, ಸದ್ಗುಣ ಸೌಂದರ್ಯಗಳಿಗೆ ಹೆಸರಾದವಳಾಗಿದ್ದಳು. ಶ್ರೀಕೃಷ್ಣ ಮುರುವನ್ನು ಯುದ್ಧದಲ್ಲಿ ಕೊಂದಾಗ ಆತನೊಡನೆ ಇವಳು ಯುದ್ಧ ಮಾಡಿ ದೈವವಿಘ್ನದಿಂದ ತಟಸ್ಥೆಯಾದಳು. ನರಕಪುತ್ರ ಭಗದತ್ತ ಈಕೆಗೆ ಆಶ್ರಯ ನೀಡಿದ. ತನ್ನ ಒಗಟುಗಳನ್ನು ಬಿಡಿಸಿ, ಯುದ್ಧದಲ್ಲಿ ತನ್ನನ್ನು ಗೆದ್ದವನನ್ನು ಮದುವೆಯಾಗುವೆನೆಂದು ಪಣತೊಟ್ಟು ಆ ನೆಪದಲ್ಲಿ ಲಕ್ಷಾಂತರ ವೀರರನ್ನು ಈ ರಾಕ್ಷಸಿ ಕೊಂದಿದ್ದಳು. ಭೀಮಪುತ್ರ ಘಟೋತ್ಕಜ ಶ್ರೀಕೃಷ್ಣನ ಅನುಗ್ರಹದಿಂದ ಈಕೆಯನ್ನು ಗೆದ್ದು ಇಂದ್ರಪ್ರಸ್ಥದಲ್ಲಿ ವಿವಾಹವಾದ. ಪರಾಕ್ರಮಿ ಬರ್ಬರಕ ಈಕೆಯ ಮಗ.     

(ಬಿ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ